Monday, July 20, 2009

ಸ್ವಲ್ಪನಗಿ

ಗುಂಡ: ಪಕ್ಕದ್ಮನೆ ರಾಣಿಗೆ ಇಂಗ್ಲಿಷ್ ಬರಲ್ಲ..... ಕಣೋ ರಾಜೇಶ.ರಾಜೇಶ: ನಿನಗೆ ಹೇಗೆ ಗೊತ್ತಾಯ್ತ?ಗುಂಡ: ರಾಣಿಗೆ 1 ಕಿಸ್ ಕೊಡು ಅಂದೆ.....ಅದಕ್ಕೆ ಕೆನ್ನೆಗೆ ಹೊಡೆದ್ಲೂ .....
ಜಿಪುಣ ಗುಂಡ ಒಮ್ಮೆ ಹಣ್ಣಿನ ಅಂಗಡಿಗೆ ಹೋಗಿ ಬಾಳೆಹಣ್ಣಿನ ಬೆಲೆ ವಿಚಾರಿಸಿದ. ಅಂಗಡಿ ಮಾಲೀಕ ಒಂದು ಬಾಳೆ ಹಣ್ಣಿಗೆ ಒಂದು ರೂಪಾಯಿ ಅಂದ.ಗುಂಡ: 60 ಪೈಸೆಗೆ ಕೊಡ್ತಿಯಾ?ಅಂಗಡಿ ಮಾಲೀಕ: 60 ಪೈಸೆಗೆ ಬಾಳೆ ಹಣ್ಣಿನ ಸಿಪ್ಪೆ ಮಾತ್ರ ಬರತ್ತೆ .......ಎಂದಗುಂಡ ಒಂದು ನಿಮಿಷ ಯೋಚಿಸಿಗುಂಡ: ಸರಿ 40 ಪೈಸೆ ಕೊಡ್ತೀನಿ, ಹಣ್ಣು ಕೊಟ್ಟು ಸಿಪ್ಪೆ ನೀನೆ ಇಟ್ಟುಕೋ ಅಂದ.
ಹೊಸದಾಗಿ ಪಡೆದುಕೊಂಡಿದ್ದ ಬೈಕ್ ಗೆ ಪೆಟ್ರೋಲ್ ಹಾಕಿಸಲು ಗುಂಡ ಪೆಟ್ರೋಲ್ ಬಂಕ್ ಗೆ ಹೋದ.ಅಲ್ಲಿ ಹೀಗೆ ಬರೆದಿತ್ತು, "ಇಲ್ಲಿ ಮೊಬೈಲ್ ಉಪಯೋಗಿಸುವುದನ್ನು ನಿಷೇದಿಸಲಾಗಿದೆ" ಎಂಬ ಬೋರ್ಡ್ ಹಾಕಲಾಗಿತ್ತು.ತಕ್ಷಣ ಅಲ್ಲೇ ತನ್ನ ಮೊಬೈಲ್ ತೆಗೆದು ತನ್ನ ಪರಿಚಿತರೆಲ್ಲರಿಗೂ ಪೋನ್ ಮಾಡಿ ಹೇಳಿದ- 'ನಾನೀಗ ಪೆಟ್ರೋಲ್ ಬಂಕ್ ನಲ್ಲಿ ಇದ್ದೇನೆ ಯಾರು ನನಗೆ ಪೋನ್ ಮಾಡಬೇಡಿ'
ರೈಲು ಬಂದು ನಿಂತಿತ್ತು. ಗುಂಡ ಪ್ಲಾಟ್ ಪಾರಂ ನಲ್ಲಿ ಆಚೀಚೆ ಸುತ್ತಾಡ್ತಾ ಇದ್ದ. ಅಷ್ಟರಲ್ಲಿ ಟ್ರೈನ್ ಕಿಟಕಿಯಿಂದ ವ್ಯಕ್ತಿಯೊಬ್ಬರು ಕೈಮಾಡಿ ಕರೆದಿದ್ದನ್ನು ನೋಡಿದ.ಗುಂಡ ಅ ವ್ಯಕ್ತಿಯ ಬಳಿ ಹೋಗಿ ಏನೆಂದು ಕೇಳಿದ.ವ್ಯಕ್ತಿ: ಸಾರ್ ಇದು ಯಾವ ಸ್ಟೇಷನ್ ಹೇಳ್ತಿರಾ?ಗುಂಡ: ರೈಲ್ವೆ ಸ್ಟೇಷನ್ ಅಷ್ಟು ಗೊತ್ತಾಗಿಲ್ವೇನ್ರಿ...

ಮಸ್ತ್ ಮಸ್ತ್ ಆಟಂಬಾಂಬ್
ಗುಂಡ ತನ್ನ ಅಮ್ಮನ ಜೊತೆ ಮಾರುಕಟ್ಟೆಯ ಕಡೆ ಹೊರಟಿದ್ದ. ದಾರಿಯಲ್ಲಿ ಒಂದು ದೊಡ್ಡ ಕಟ್ಟಡದ ಮುಂದೆ ನಿಂತ
ಗುಂಡ: ಅಮ್ಮಾ... ಈ ಸಾರಿ ದೀಪಾವಳಿಗೆ ಬಾಂಬ್, ಆಟಂಬಾಂಬ್, ಸುರ್ ಸುರ್ ಬತ್ತಿ ತಗೊಂಡು ಹೋಗೋಣ
ಅಮ್ಮ: ಇದು ಪಟಾಕಿ ಅಂಗಡಿ ಅಲ್ಲ, ಹುಡಗಿಯರ ಹಾಸ್ಟಲ್ ಮಗಾ..
ಗುಂಡ: ಮತ್ತೆ, ಅಪ್ಪ ಇಲ್ಲಿ ಮಸ್ತ್ ಮಸ್ತ್ ಆಟಂಬಾಂಬ್ ಇವೆ ಅಂತಿರ್ತಾರೆ...

ಸೈಕಲ್ ಇಳಿಯೋದೆ ಹೀಗೆ...
ಗುಂಡ ಸೈಕಲ್ ಹತ್ತಿ ಒಂದು ದಿನ ಸಂಚಾರಕ್ಕೆ ಹೊರಟ, ಇಳಿಯುವ ಸಂದರ್ಭದಲ್ಲಿ ದಢಾರನೆ ಬಿದ್ದ. ಆಗ ಸುತ್ತಲಿನ ಜನರೆಲ್ಲಾ ನೆರವಿಗೆ ಬಂದರು
ಗುಂಡ: ಅರೆ! ನೀವೆಲ್ಲ ಯಾಕೆ ಬಂದ್ರೀ ?
ಜನ: ನೀನು ಬಿದ್ಯಲ್ಲಾ ಮಾರಯ ಅದಕ್ಕೆ ಎತ್ತಲು ಬಂದೆವು.
ಗುಂಡ: ದಯವಿಟ್ಟು ಬೇಜಾರ್ ಆಗಬೇಡಿ ನಾನು ಸೈಕಲ್ ಇಳಿಯೋದೇ ಹೀಗೆ.....


ಪಾರ್ಕಿಂಗ್ ಫಾರ್ ಟೂ ವ್ಹೀಲರ್ ಓನ್ಲಿ...
ಗುಂಡ ಶಾಪಿಂಗ್ ಮಾಡಲು ಸ್ನೇಹಿತನ ಜೊತೆಗೆ ಮೆಜೆಸ್ಟಿಕ್ ಗೆ ಕಾರಿನಲ್ಲಿ ಹೋಗಿದ್ದ. ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ, ತಕ್ಷಣ ಕಾರಿನ ಎರಡೂ ಚಕ್ರ ಕೀಳಲು ಶುರು ಮಾಡಿದ. ಇದನ್ನು ನೋಡಿದ ಸ್ನೇಹಿತ ಒಮ್ಮೆಲೆ ಕಕ್ಕಾಬಿಕ್ಕಿಯಾದ.
ಸ್ನೇಹಿತ: ಯಾಕೋ ಕಾರಿನ ಚಕ್ರ ಒಂದೇ ಸಮನೇ ಕೀಳ್ತಾ ಇದ್ಯಾ?
ಗುಂಡ: ದಡ್ದಾ, ಅಷ್ಟು ಗೊತ್ತಾಗಲ್ವಾ? ಅಲ್ಲಿ ಬೋರ್ಡ್ ನೋಡು, "ಪಾರ್ಕಿಂಗ್ ಫಾರ್ ಟೂ ವ್ಹೀಲರ್ ಒನ್ಲಿ".

ಟ್ರಾಪಿಕ್ ಸಿಗ್ನಲ್
ಟ್ರಾಪಿಕ್ ಸಿಗ್ನಲ್ .......
ಗುಂಡ ಮತ್ತು ಅವನ ಸ್ನೇಹಿತ ಮನೆ ಕಡೆ ಹೊರಟರು ಗುಂಡ ಟವರ್ ಒಂದನ್ನು ನೋಡಿ ನಿಂತವನೇ ಸ್ನೇಹಿತನ ಕಡೆ ನೋಡಿಗುಂಡ: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದೆಯಲ್ಲಸ್ನೇಹಿತ: ಹೌದಾ? ಅಂತದ್ದೇನು ನೀನು ನೋಡಿದೆ ?ಗುಂಡ: ಅಲ್ನೋಡು ಎತ್ತರದ ಟವರ್, ಅದರ ಮೇಲೆ ಕೆಂಪು ಲೈಟ್ ಇದೇ. ಯಾಕೆ ಹೇಳು? ರಸ್ತೆಯ ಮೇಲೆ ಓಡಾಡುವ ವಾಹನಗಳಿಗೆ ಟಾಪಿಕ್ ಸಿಗ್ನಲ್ ಇರತ್ತಲ್ಲ, ಹಾಗೇನೇ ಏರೋಪ್ಲೇನ್ ಗಳಿಗೋಸ್ಕರ ಹಾಕಿರೋ ಟ್ರಾಪಿಕ್ ಸಿಗ್ನಲ್ ಅದು......

ಕೀಟಲೆ
ಗುಂಡ ಶಾಲೆಯಲ್ಲಿ ಮಲಗಿದ್ದ ಗುರುಗಳು ಬಂದರು ಗುಂಡ ಮಲಗಿದ್ದನ್ನು ನೋಡಿ ಅವರಿಗೆ ರೇಗಿತು. ಗುಂಡನ್ನನ್ನು ಎಬ್ಬಿಸಿ ನೀನು ಶಾಲೆಗೆ ಬರುವುದು ಎತಕ್ಕೇ ಎಂದರು ಗುಂಡ ವಿದ್ಯೆಗಾಗಿ ಎಂದ ಅಗ ಗುರುಗಳಿಗೆ ಮತ್ತು ರೇಗಿತು ಗಟ್ಟಿಯಾಗಿ ಕೇಳಿದರು ಮತ್ತೆ ಮಲಗಿದ್ದೀಯಲ್ಲೋ ಗುಂಡ ತಣ್ಣಗೆ ಹೇಳಿದ ಈ ದಿನ ವಿದ್ಯಾ ಶಾಲೆಗೆ ಬಂದಿಲ್ಲ ಸಾರ್

No comments:

Post a Comment