Monday, July 20, 2009

ಶಾಮನೂರಿನ ಕೆರೆ

ನಮ್ಮೂರ (ಶಾಮನೂರಿನ) ಕೆರೆಯಾ ಸುಂದರ ನೋಟ

ಒಂದಿಷ್ಟು ಸಂಗ್ರಹಿತ ನಗೆಬುಗ್ಗೆಗಳು..

ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್ ನಲ್ಲಿ ಕುಳಿತುಬಿಟ್ಟಿದ್ದೆ.." ಅಂದರು.

******

ಸರ್: ಯಾಕ್ಲೇ ಗುಂಡಾ..ಮುಂದ ಇನ್ ಶರ್ಟ್ ಮಾಡಿ ಹಿಂದಾ ಹೊರಗಾ ಬಿಟ್ಟಿದೀಯಲ್ಲಾ?ಗುಂಡ: "ಮುಂದ ಅಂಗಿ ಹರ್ದೆತ್ರಿ... ಹಿಂದ ಪ್ಯಾಂಟ್ ಹರ್ದೆತ್ರಿ.. ಅದಕ್ಕೆ ರಿ ಸರ..."

*****

ರಿಸೆಷನ್ ಟೈಮ್ ನಲ್ಲಿ ಕಂಪನಿಯೊಂದು ಬಳಸಬಹುದಾದ ತಂತ್ರ.ಟಿಶ್ಯೂ ಪೇಪರ್ ನ ಬದಲು ಹೊಸತಾಗಿ ಕಾಲೇಜು ಮುಗಿಸಿದವರು ಕೆಲಸಕ್ಕಾಗಿ ನೀಡಿದ ರೆಸ್ಯೂಮ್ ಬಳಸುವುದು!

*********

ನಗೆಸಾಮ್ರಾಟರು ಸಲೂನ್ ಗೆ ಹೋದಾಗ ನಡೆದ ಘಟನೆ.ಅಲ್ಲಿಗೆ ಒಬ್ಬ ನೋಡಲು ಒಂದು ಆಂಗಲ್ ನಲ್ಲಿ ಗಾಂಧಿಯಂತೆ ಕಾಣುತ್ತಿದ್ದ ವ್ಯಕ್ತಿ ಬಂದ ತಲೆಯಲ್ಲಿ ಯಾವ ಕಡೆಯಿಂದ ಕೂಡಿಸಿದರೂ ಒಂಭತ್ತಕ್ಕಿಂತ ಹೆಚ್ಚು ಕೂದಲು ಕಾಣ್ತಿಲ್ಲ. ಅವನ ತಲೆ ನೋಡಿ ಸಿಟ್ಟಾದ ಸಲೂನಿನ ಬಿಲ್ಲು, " ಏನ್ಸಾರ್ ಕೌಂಟ್ ಮಾಡಲಾ? ಕಟ್ ಮಾಡಲಾ?" ಎಂದು ಕೇಳಿದ್ದಕ್ಕೆ
ಆ ವ್ಯಕ್ತಿ ವಿನಮ್ರತೆಯಿಂದ.."ಕಲರ್ ಮಾಡು.." ಅಂದ!ನೋಡಿ ಸಾಮ್ರಾಟರು ಸುಸ್ತು.

******

ಸಾಮ್ರಾಟರ ಮಗನಿಗೆ ಶಾಲೆಯಲಿ ರೇಸ್ ಬಗ್ಗೆ ಬರೆಯಲು ಹೇಳಿದ್ದರು. ಅದನ್ನು ಒಂಚೂರೂ ಎಡಿಟ್ ಮಾಡದೇ ಇಲ್ಲಿ ನೀಡುತ್ತಿದ್ದೇವೆ."ಅದು ಇರುವೆಗಳ ಸೈಕಲ್ ರೇಸು. ಕುಂದಾಪುರದಿಂದ ಶುರುವಾದ ರೇಸು ಮುಗಿಯುವುದು ಉಡುಪಿಯಲಿ. ಒಂದು ಇರುವೆಯು ಇಲ್ಲದ ಗೇರನ್ನು ಕಲ್ಪಿಸಿಕೊಳ್ಳುತ್ತ ಸೈಕಲ್ ನ್ನು ಪಲ್ಸಾರ್ ತರಹ ಓಡಿಸುತ್ತಿತ್ತು. ಆಗ ಅಲ್ಲಿಗೆ ಸೈಟ್ ಸೀಯಿಂಗ್ ಗೆ ಬಂದ ಆನೆ ದಾರಿಗಡ್ಡವಾದಾಗ ಸಡನ್ನಾಗಿ ಬ್ರೇಕ್ ಹಾಕಿದ ಇರುವೆಯು .." ಅಡಿಕ್ ಬೂರ್ದು ಸೈಪನ ಮರೆ..!" (ಅಡಿಗೆ ಬಿದ್ದು ಸಾಯ್ತೀಯ ಮಾರಾಯ) ಅಂದಿತು.ಮಗನ ಕಲ್ಪನೆಗಳ ಬಗ್ಗೆ ಹೆಮ್ಮೆ ಪಟ್ಟ ಸಾಮ್ರಾಟರು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದರೆ, ಮಗರಾಯ ’ಅಪ್ಪ ಹೀಗೆ ಹೇಳ್ತಾ ಇದ್ದರೆ ಆನೆ ಮರ್ಯಾದೆ ಏನಾಗಬೇಕಂತ’ ಆಲೋಚಿಸಿ ಆನೆಯನ್ನೇ ಹೀರೋ ಆಗಿಸಿ ಏನೋ ಬರೆಯುತ್ತಿದ್ದಾನಂತೆ!

*****

ಈ ಸಲ ಇಂಕ್ರಿಮೆಂಟು ನೀಡದ್ದಕ್ಕೆ ಸಿಟ್ಟಾದ ನಗೆಸಾಮ್ರಾಟರು ತನ್ನ ಬಾಸ್ ಗೆ ಧಮಕಿ ಹಾಕಿದ್ದು ಹೇಗೆ ಗೊತ್ತೆ?" ಈ ತಿಂಗಳು ನನ್ನ ಸಂಬಳ ಹೆಚ್ಚು ಮಾಡದಿದ್ದರೆ, ಆಫೀಸಿನ ಎಲ್ಲರಿಗೂ ನೀವು ನನಗೆ ಇಂಕ್ರಿಮೆಂಟ್ ಕೊಟ್ಟಿರೆಂದು ಸುದ್ಧಿ ಹಬ್ಬಿಸುತ್ತೇನೆ..!"

*****

ಕಳೆದ ಸಲ ನಗೆ ಸಾಮ್ರಾಟರು ಅಮೇರಿಕಾಗೆ ಹೋಗಿದ್ದಾಗ ಅಲ್ಲೊಂದು ಮೆಶೀನ್ ನೋಡಿದರು. ಅದು ಕಳ್ಳರನ್ನು ಹಿಡಿವ ಯಂತ್ರವಾಗಿತ್ತು. ಅಲ್ಲೇ ಸಾಕ್ಷಾತ್ ಅವರ ಕಣ್ಣೆದುರೇ ಘಂಟೆ ೧೦ ಲೆಕ್ಕದಲ್ಲಿ ಕಳ್ಳರನ್ನು ಹಿಡಿಯಿತು. ಖುಷ್ ಆದ ಸಾಮ್ರಾಟರು ಭಾರಿ ಮೊತ್ತ ತೆತ್ತು ಕರ್ನಾಟಕದ ಪೋಲೀಸರಿಗೆ ತೋರಿಸುತ್ತೇನೆ ಅಂತ ಹೇಳಿಕೊಳ್ಳುತ್ತಿದ್ದರು.ಆದರೆ ಇಲ್ಲಿ ಇಟ್ಟ ಮಾರನೇ ದಿನವೇ ಮೆಶೀನ್ ಕಳುವಾಯಿತಂತೆ.

*****

ಭೀಮನು ಧುರ್ಯೋದನನನ್ನು ಹೇಗೆ ಕೊಂದನು?ಒಂದು ಮಾರ್ಕ್ಸಿನ ಪ್ರಶ್ನೆಯಾದರೆ ಸಾಮ್ರಾಟರ ಮಗ ಅಷ್ಟು ತಲೆತುರಿಸಿಕೊಳ್ಳುತ್ತಿರಲಿಲ್ಲ. ಅಷ್ಟು ದಡ್ಡನೆಂದು ತಿಳಿದಿರೇ? ಆ ಪ್ರಶ್ನೆ ೧೫ ಅಂಕಕ್ಕೆ ಕೇಳಲ್ಪಟ್ಟಿತ್ತು. ಆಗ್ಲೇ ಮೇಷ್ಟ್ರು ತುಂಬಾ ಸಲ ಹೇಳಿದ್ದರು ಹದಿನೈದು ಮಾರ್ಕ್ಸಿನ ಪ್ರಶ್ನೆಗೆ ಉತ್ತರಿಸುವಾಗ ಕೊನೆಯ ಪಕ್ಷ ಒಂದು ಪುಟವಾದರೂ ಬರೆಯಲೇಬೇಕೆಂದು. ಪ್ರಶ್ನೆ ಕೇಳುವವರಿಗೆ ಕಾಮನ್ ಸೆನ್ಸ್ ಬೇಡವೇ ಅಂತ ಬಯ್ದುಕೊಳ್ಳುತ್ತಾ ಕೊನೆಗೆ ಒಂದು ಉಪಾಯ ಕಂಡುಕೊಂಡ."ಭೀಮನು ಧುರ್ಯೋಧನನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ....." ಹೀಗೆ ಬರೆಯುತ್ತಾ ಪುಟದ ಕೊನೆಗೆ ".... ಗುದ್ದಿ ಕೊಂದನು." ಹೀಗೆ ಮುಗಿಸಿದ!

ಸ್ವಲ್ಪನಗಿ

ಗುಂಡ: ಪಕ್ಕದ್ಮನೆ ರಾಣಿಗೆ ಇಂಗ್ಲಿಷ್ ಬರಲ್ಲ..... ಕಣೋ ರಾಜೇಶ.ರಾಜೇಶ: ನಿನಗೆ ಹೇಗೆ ಗೊತ್ತಾಯ್ತ?ಗುಂಡ: ರಾಣಿಗೆ 1 ಕಿಸ್ ಕೊಡು ಅಂದೆ.....ಅದಕ್ಕೆ ಕೆನ್ನೆಗೆ ಹೊಡೆದ್ಲೂ .....
ಜಿಪುಣ ಗುಂಡ ಒಮ್ಮೆ ಹಣ್ಣಿನ ಅಂಗಡಿಗೆ ಹೋಗಿ ಬಾಳೆಹಣ್ಣಿನ ಬೆಲೆ ವಿಚಾರಿಸಿದ. ಅಂಗಡಿ ಮಾಲೀಕ ಒಂದು ಬಾಳೆ ಹಣ್ಣಿಗೆ ಒಂದು ರೂಪಾಯಿ ಅಂದ.ಗುಂಡ: 60 ಪೈಸೆಗೆ ಕೊಡ್ತಿಯಾ?ಅಂಗಡಿ ಮಾಲೀಕ: 60 ಪೈಸೆಗೆ ಬಾಳೆ ಹಣ್ಣಿನ ಸಿಪ್ಪೆ ಮಾತ್ರ ಬರತ್ತೆ .......ಎಂದಗುಂಡ ಒಂದು ನಿಮಿಷ ಯೋಚಿಸಿಗುಂಡ: ಸರಿ 40 ಪೈಸೆ ಕೊಡ್ತೀನಿ, ಹಣ್ಣು ಕೊಟ್ಟು ಸಿಪ್ಪೆ ನೀನೆ ಇಟ್ಟುಕೋ ಅಂದ.
ಹೊಸದಾಗಿ ಪಡೆದುಕೊಂಡಿದ್ದ ಬೈಕ್ ಗೆ ಪೆಟ್ರೋಲ್ ಹಾಕಿಸಲು ಗುಂಡ ಪೆಟ್ರೋಲ್ ಬಂಕ್ ಗೆ ಹೋದ.ಅಲ್ಲಿ ಹೀಗೆ ಬರೆದಿತ್ತು, "ಇಲ್ಲಿ ಮೊಬೈಲ್ ಉಪಯೋಗಿಸುವುದನ್ನು ನಿಷೇದಿಸಲಾಗಿದೆ" ಎಂಬ ಬೋರ್ಡ್ ಹಾಕಲಾಗಿತ್ತು.ತಕ್ಷಣ ಅಲ್ಲೇ ತನ್ನ ಮೊಬೈಲ್ ತೆಗೆದು ತನ್ನ ಪರಿಚಿತರೆಲ್ಲರಿಗೂ ಪೋನ್ ಮಾಡಿ ಹೇಳಿದ- 'ನಾನೀಗ ಪೆಟ್ರೋಲ್ ಬಂಕ್ ನಲ್ಲಿ ಇದ್ದೇನೆ ಯಾರು ನನಗೆ ಪೋನ್ ಮಾಡಬೇಡಿ'
ರೈಲು ಬಂದು ನಿಂತಿತ್ತು. ಗುಂಡ ಪ್ಲಾಟ್ ಪಾರಂ ನಲ್ಲಿ ಆಚೀಚೆ ಸುತ್ತಾಡ್ತಾ ಇದ್ದ. ಅಷ್ಟರಲ್ಲಿ ಟ್ರೈನ್ ಕಿಟಕಿಯಿಂದ ವ್ಯಕ್ತಿಯೊಬ್ಬರು ಕೈಮಾಡಿ ಕರೆದಿದ್ದನ್ನು ನೋಡಿದ.ಗುಂಡ ಅ ವ್ಯಕ್ತಿಯ ಬಳಿ ಹೋಗಿ ಏನೆಂದು ಕೇಳಿದ.ವ್ಯಕ್ತಿ: ಸಾರ್ ಇದು ಯಾವ ಸ್ಟೇಷನ್ ಹೇಳ್ತಿರಾ?ಗುಂಡ: ರೈಲ್ವೆ ಸ್ಟೇಷನ್ ಅಷ್ಟು ಗೊತ್ತಾಗಿಲ್ವೇನ್ರಿ...

ಮಸ್ತ್ ಮಸ್ತ್ ಆಟಂಬಾಂಬ್
ಗುಂಡ ತನ್ನ ಅಮ್ಮನ ಜೊತೆ ಮಾರುಕಟ್ಟೆಯ ಕಡೆ ಹೊರಟಿದ್ದ. ದಾರಿಯಲ್ಲಿ ಒಂದು ದೊಡ್ಡ ಕಟ್ಟಡದ ಮುಂದೆ ನಿಂತ
ಗುಂಡ: ಅಮ್ಮಾ... ಈ ಸಾರಿ ದೀಪಾವಳಿಗೆ ಬಾಂಬ್, ಆಟಂಬಾಂಬ್, ಸುರ್ ಸುರ್ ಬತ್ತಿ ತಗೊಂಡು ಹೋಗೋಣ
ಅಮ್ಮ: ಇದು ಪಟಾಕಿ ಅಂಗಡಿ ಅಲ್ಲ, ಹುಡಗಿಯರ ಹಾಸ್ಟಲ್ ಮಗಾ..
ಗುಂಡ: ಮತ್ತೆ, ಅಪ್ಪ ಇಲ್ಲಿ ಮಸ್ತ್ ಮಸ್ತ್ ಆಟಂಬಾಂಬ್ ಇವೆ ಅಂತಿರ್ತಾರೆ...

ಸೈಕಲ್ ಇಳಿಯೋದೆ ಹೀಗೆ...
ಗುಂಡ ಸೈಕಲ್ ಹತ್ತಿ ಒಂದು ದಿನ ಸಂಚಾರಕ್ಕೆ ಹೊರಟ, ಇಳಿಯುವ ಸಂದರ್ಭದಲ್ಲಿ ದಢಾರನೆ ಬಿದ್ದ. ಆಗ ಸುತ್ತಲಿನ ಜನರೆಲ್ಲಾ ನೆರವಿಗೆ ಬಂದರು
ಗುಂಡ: ಅರೆ! ನೀವೆಲ್ಲ ಯಾಕೆ ಬಂದ್ರೀ ?
ಜನ: ನೀನು ಬಿದ್ಯಲ್ಲಾ ಮಾರಯ ಅದಕ್ಕೆ ಎತ್ತಲು ಬಂದೆವು.
ಗುಂಡ: ದಯವಿಟ್ಟು ಬೇಜಾರ್ ಆಗಬೇಡಿ ನಾನು ಸೈಕಲ್ ಇಳಿಯೋದೇ ಹೀಗೆ.....


ಪಾರ್ಕಿಂಗ್ ಫಾರ್ ಟೂ ವ್ಹೀಲರ್ ಓನ್ಲಿ...
ಗುಂಡ ಶಾಪಿಂಗ್ ಮಾಡಲು ಸ್ನೇಹಿತನ ಜೊತೆಗೆ ಮೆಜೆಸ್ಟಿಕ್ ಗೆ ಕಾರಿನಲ್ಲಿ ಹೋಗಿದ್ದ. ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ, ತಕ್ಷಣ ಕಾರಿನ ಎರಡೂ ಚಕ್ರ ಕೀಳಲು ಶುರು ಮಾಡಿದ. ಇದನ್ನು ನೋಡಿದ ಸ್ನೇಹಿತ ಒಮ್ಮೆಲೆ ಕಕ್ಕಾಬಿಕ್ಕಿಯಾದ.
ಸ್ನೇಹಿತ: ಯಾಕೋ ಕಾರಿನ ಚಕ್ರ ಒಂದೇ ಸಮನೇ ಕೀಳ್ತಾ ಇದ್ಯಾ?
ಗುಂಡ: ದಡ್ದಾ, ಅಷ್ಟು ಗೊತ್ತಾಗಲ್ವಾ? ಅಲ್ಲಿ ಬೋರ್ಡ್ ನೋಡು, "ಪಾರ್ಕಿಂಗ್ ಫಾರ್ ಟೂ ವ್ಹೀಲರ್ ಒನ್ಲಿ".

ಟ್ರಾಪಿಕ್ ಸಿಗ್ನಲ್
ಟ್ರಾಪಿಕ್ ಸಿಗ್ನಲ್ .......
ಗುಂಡ ಮತ್ತು ಅವನ ಸ್ನೇಹಿತ ಮನೆ ಕಡೆ ಹೊರಟರು ಗುಂಡ ಟವರ್ ಒಂದನ್ನು ನೋಡಿ ನಿಂತವನೇ ಸ್ನೇಹಿತನ ಕಡೆ ನೋಡಿಗುಂಡ: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದೆಯಲ್ಲಸ್ನೇಹಿತ: ಹೌದಾ? ಅಂತದ್ದೇನು ನೀನು ನೋಡಿದೆ ?ಗುಂಡ: ಅಲ್ನೋಡು ಎತ್ತರದ ಟವರ್, ಅದರ ಮೇಲೆ ಕೆಂಪು ಲೈಟ್ ಇದೇ. ಯಾಕೆ ಹೇಳು? ರಸ್ತೆಯ ಮೇಲೆ ಓಡಾಡುವ ವಾಹನಗಳಿಗೆ ಟಾಪಿಕ್ ಸಿಗ್ನಲ್ ಇರತ್ತಲ್ಲ, ಹಾಗೇನೇ ಏರೋಪ್ಲೇನ್ ಗಳಿಗೋಸ್ಕರ ಹಾಕಿರೋ ಟ್ರಾಪಿಕ್ ಸಿಗ್ನಲ್ ಅದು......

ಕೀಟಲೆ
ಗುಂಡ ಶಾಲೆಯಲ್ಲಿ ಮಲಗಿದ್ದ ಗುರುಗಳು ಬಂದರು ಗುಂಡ ಮಲಗಿದ್ದನ್ನು ನೋಡಿ ಅವರಿಗೆ ರೇಗಿತು. ಗುಂಡನ್ನನ್ನು ಎಬ್ಬಿಸಿ ನೀನು ಶಾಲೆಗೆ ಬರುವುದು ಎತಕ್ಕೇ ಎಂದರು ಗುಂಡ ವಿದ್ಯೆಗಾಗಿ ಎಂದ ಅಗ ಗುರುಗಳಿಗೆ ಮತ್ತು ರೇಗಿತು ಗಟ್ಟಿಯಾಗಿ ಕೇಳಿದರು ಮತ್ತೆ ಮಲಗಿದ್ದೀಯಲ್ಲೋ ಗುಂಡ ತಣ್ಣಗೆ ಹೇಳಿದ ಈ ದಿನ ವಿದ್ಯಾ ಶಾಲೆಗೆ ಬಂದಿಲ್ಲ ಸಾರ್

Jog



jog jalapata my favourite tourism place....

Hi

Welcome to my blog